ಸೃಜನ್ ಲೋಕೇಶ್

ಸೃಜನ್ ಲೋಕೇಶ್ (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ ಲೋಕೇಶ್ ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ ಗಿರಿಜಾ ಲೋಕೇಶ್ ಅವರು ದೂರದರ್ಶನದ ನಟಿ. ಅವರ ಅಜ್ಜ ಸುಬ್ಬಯ್ಯ ನಾಯ್ಡು ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. [೧]

ಸೃಜನ್ ಲೋಕೇಶ್
ಜನನ (1980-06-28) ೨೮ ಜೂನ್ ೧೯೮೦ (ವಯಸ್ಸು ೪೩)
ರಾಷ್ಟ್ರೀಯತೆಭಾರತೀಯ
ಉದ್ಯೋಗನಟ, ರೇಡಿಯೋ ರೇಡಿಯೋ, ದೂರದರ್ಶನ ನಿರೂಪಕ
ಸಕ್ರಿಯ ವರ್ಷಗಳು2002–
Televisionಮಜಾ ಟಾಕೀಸ್ (2011)
ಸೈ
ಮಜಾ ಟಾಕೀಸ್(2015)
ಜೀವನ ಸಂಗಾತಿಗ್ರೀಷ್ಮ
ಮಕ್ಕಳು2
ಪೋಷಕರುಲೋಕೇಶ್
ಗಿರಿಜಾ ಲೋಕೇಶ್
ನೆಂಟರುಸುಬ್ಬಯ್ಯ ನಾಯ್ಡು (ಅಜ್ಜ)
ಪೂಜಾ ಲೋಕೇಶ್ (ತಂಗಿ)

ಕುಟುಂಬಬದಲಾಯಿಸಿ

ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರ ತಂಗಿ ಪೂಜಾ ಲೋಕೇಶ್ ಕನ್ನಡ ಹಾಗು ತಮಿಳಿನ ಕಲಾವಿದೆ. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .

ನಟನಾವೃತ್ತಿಬದಲಾಯಿಸಿ

ಸೃಜನ್ ಲೋಕೇಶ್ ಆರಂಭದಲ್ಲಿ ನಟಿಸಿದ ಚಲನಚಿತ್ರದಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನ ಕಾರ್ಯಕ್ರಮ ಮಜಾ ವಿತ್ ಸೃಜಾ , ಮಜಾ ಟಾಕೀಸ್ ಪ್ರಸಿದ್ದಿ ಪಡೆಯಿತು.[೨]

ಬಾಲ ನಟನಾಗಿಬದಲಾಯಿಸಿ

ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು. ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.

ಪಾತ್ರಗಳಲ್ಲಿಬದಲಾಯಿಸಿ

ಸೃಜನ್ ಅವರು ರಾಧಿಕಾ ಕುಮಾರಸ್ವಾಮಿ ಜೊರೆ ನಟಿಸಿದ ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರು ನಟನಾಗಿ ಯಶಸ್ಸನ್ನು ಕಾಣಲಿಲ್ಲ. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ, ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು .[೩]

ನಿರ್ಮಾಣಬದಲಾಯಿಸಿ

೨೦೧೩ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ನಿಭಾಯಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರು ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ . ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ .[೪]

ಪ್ರಶಸ್ತಿಗಳು ಮತ್ತು ಗೌರವಗಳುಬದಲಾಯಿಸಿ

*೨೦೧೧ರಲ್ಲಿ ಸುವರ್ಣ ಚಾನೆಲ್ ಅವರು ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ನೀಡಿದ್ದಾರೆ .

*೨೦೧೧ರಲ್ಲಿ ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್ ನಲ್ಲಿ ಅತ್ಯಂತ ಜನಪ್ರಿಯ ವರ್ಗದಲ್ಲಿ ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ಲಭಿಸಿದೆ.

*೨೦೧೨ & ೨೦೧೩ರ ಮಾಧ್ಯಮ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ.

ಚಲನಚಿತ್ರಗಳ ಪಟ್ಟಿಬದಲಾಯಿಸಿ

ವರ್ಷಸಿನಿಮಾಗಳುಪಾತ್ರಇತರೆ ಟಿಪ್ಪಣಿಗಳು
1991ವೀರಪ್ಪನ್ ಬಾಲ ನಟ
1990ಬುಜಂಗಯ್ಯನ ದಶಾವಾತಾರಬಾಲ ನಟ
2002ನೀಲ ಮೇಘ ಶ್ಯಾಮಶ್ಯಾಮಮುಖ್ಯ ಪಾತ್ರ
2005ಲಾರ್ಟಿ ಚಾರ್ಜ್
2007ಪ್ರೀತಿಗಾಗಿ
2008ನವಗ್ರಹಘೆಂಡೆನಾಯಕ
2009ಐಪಿಸಿ ಸೆಕ್ಷನ್ ೩೦೦
2010ಪೊರ್ಕಿನಾಯಕನ ಸ್ನೇಹಿತ
2012ಚಿಂಗಾರಿ
2012ಸ್ನೇಹಿತರುಪರಶುರಾಮನಾಯಕ
2012ಎದೆಗಾರಿಕೆಬಚ್ಚನ್
2013ಅಂದರ್ ಬಾಹರ್
2013ಆನೆ ಪಟಾಕಿಬೀರೇಗೌಡಮುಖ್ಯ ಪಾತ್ರ
2014ಟಿಪಿಕಲ್ ಕೈಲಾಸ್ಕೈಲಾಸ್ಮುಖ್ಯ ಪಾತ್ರ
2014ಪರಮಶಿವ
2015ಸಪ್ನೊಂ ಕಿ ರಾಣಿಮುಖ್ಯ ಪಾತ್ರ
2015ಲವ್ ಯು ಆಲಿಯಾಅತಿಥಿ ಪಾತ್ರʼʼಕಾಮಾಕ್ಷಿ ಕಾಮಾಕ್ಷಿʼʼ ಹಾಡಿನಲ್ಲಿ ಅತಿಥಿ ಪಾತ್ರ
2016ಜಗ್ಗು ದಾದಮಂಜು
2017ಚಕ್ರವರ್ತಿಕಿಟಪ್ಪ
2017ಹ್ಯಾಪಿ ಜರ್ನಿಆರ್ಯಮುಖ್ಯ ಪಾತ್ರ
2018ಭೂತಯ್ಯನ ಮೊಮ್ಮಗ ಆಯ್ಯುನಿರೂಪಕನಿರೂಪಕ ಧ್ವನಿ
2019ಎಲ್ಲಿದ್ದೆ ಇಲ್ಲಿತನಕಸೂರ್ಯಮುಖ್ಯ ಪಾತ್ರ
2022ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿಸೂರ್ಯ

ಟಿವಿ ಕಾರ್ಯಕ್ರಮಗಳ ಪಟ್ಟಿಬದಲಾಯಿಸಿ

ವರ್ಷಶೀರ್ಷಿಕೆಪಾತ್ರವಾಹಿನಿRef.
2011‌ಮಜಾ ವಿತ್ ಸೃಜಾನಿರೂಪಕಸುವರ್ಣ
ಸೈನಿರೂಪಕಸುವರ್ಣ
2012ಕಿಚನ್‌ ಕಿಲಾಡಿಗಳೂಸಹ-ನಿರೂಪಕಸುವರ್ಣ[೫]
ಸ್ಟಾರ್‌ ಸಿಂಗರ್‌ ಗ್ರಾಂಡ್‌ ಫಿನಾಲೆನಿರೂಪಕಸುವರ್ಣ
ಸ್ಟಾರ್‌ ಸುವರ್ಣ ಆವಾರ್ಡ್ಸ್ನಿರೂಪಕಸುವರ್ಣ
ಸೈ 2ನಿರೂಪಕಸುವರ್ಣ
ಮಮ್ಮಿ ನಂ. 1ನಿರೂಪಕಸುವರ್ಣ
2013ಕಾಸ್‌ ಗೆ ಟಾಸ್ನಿರೂಪಕಝೀ ಕನ್ನಡ
ಛೋಟಾ ಚಾಂಪಿಯನ್ನಿರೂಪಕಝೀ ಕನ್ನಡ[೬]
2014ಛೋಟಾ ಚಾಂಪಿಯನ್ 2ನಿರೂಪಕಝೀ ಕನ್ನಡ
ಬಿಗ್‌ ಬಾಸ್‌ ಕನ್ನಡ 2ಸ್ಪರ್ಧಿಸುವರ್ಣ
2015–2017ಮಜಾ ಟಾಕೀಸ್ನಿರೂಪಕಕಲರ್ಸ್ ಕನ್ನಡ (ಈ ಟವಿ ಕನ್ನಡ)
2018– 2019ಮಜಾ ಟಾಕೀಸ್ನಿರೂಪಕಕಲರ್ಸ ಕನ್ನಡ[೭]
2019 ಕಾಮಿಡಿ ಟಾಕೀಸ್‌ಜಡ್ಜ್ಕಲರ್ಸ ಕನ್ನಡ ಸೂಪರ್‌
2020ಮಜಾ ಟಾಕೀಸ್ನಿರೂಪಕಕಲರ್ಸ್ ಕನ್ನಡ
2021ರಾಜ ರಾಣಿಜಡ್ಜ್ಕಲರ್ಸ್ ಕನ್ನಡ
2021 -ನನ್ನಮ್ಮ ಸೂಪರ್‌ ಸ್ಟಾರ್ಜಡ್ಜ್ಕಲರ್ಸ್ ಕನ್ನಡ
2022 -ಗಿಚಿಗಿಲಿಗಿಲಿಜಡ್ಜ್ಕಲರ್ಸ್ ಕನ್ನಡ
2023 - ಪ್ರಸ್ತುತಫ್ಯಾಮಿಲಿ ಗ್ಯಾಂಗ್‌ಸ್ಟರ್ನಿರೂಪಕಕಲರ್ಸ್ ಕನ್ನಡ

ಉಲ್ಲೇಖಗಳುಬದಲಾಯಿಸಿ

  1. "ಸೃಜನ್ ಲೋಕೇಶ್'s biography and latest film release news". FilmiBeat. Retrieved 6 January 2020.
  2. "'ಮಜಾ ಟಾಕೀಸ್' ನಗುವಿಗೆ ಬ್ರೇಕ್ ಹಾಕಿದ ಸೃಜನ್ ಲೋಕೇಶ್; ಕಾರಣವೇನು?". Vijaya Karnataka. 16 September 2019. Retrieved 6 January 2020.
  3. "ತಂದೆಗೆ ಸಿಕ್ಕ ಚಿತ್ರಕಥೆಗಳಿಗಾಗಿ ಕಾಯುತ್ತಿದ್ದೇನೆ: ಸೃಜನ್ ಲೋಕೇಶ್". Kannadaprabha. Retrieved 6 January 2020.
  4. "Majja Talkies to have a 104-episode run time - Times of India". The Times of India. Retrieved 6 January 2020. {{cite news}}: Cite has empty unknown parameter: |1= (help)
  5. "ಸುವರ್ಣದಲ್ಲಿ ಚಂದ್ರು, ಸೃಜನ್ & 'ಕಿಚನ್ ಕಿಲಾಡಿಗಳು'". Filmibeat. 26 January 2012. Archived from the original on 3 February 2018. Retrieved 3 February 2018.
  6. "Everyone loves a show with kids: Srujan Lokesh". The Times of India. 12 April 2014. Archived from the original on 3 February 2018. Retrieved 3 February 2018.
  7. "Sharan to be first guest of Majaa Talkies Super Season". The Times of India. 31 January 2018. Archived from the original on 2 June 2018. Retrieved 3 February 2018.
🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಜೀವಕೋಶಧೂಮಕೇತುಪ್ರಸ್ಥಭೂಮಿಕುವೆಂಪುಸಹಾಯ:ಲಿಪ್ಯಂತರನ್ಯೂಟನ್‍ನ ಚಲನೆಯ ನಿಯಮಗಳುವರ್ಣತಂತು (ಕ್ರೋಮೋಸೋಮ್)ವಿಶೇಷ:Searchಬ್ರಿಟೀಷ್ ಸಾಮ್ರಾಜ್ಯಗುರುಲಿಂಗ ಕಾಪಸೆಕನ್ನಡ ಗುಣಿತಾಕ್ಷರಗಳುಗಾದೆಬ್ರಾಟಿಸ್ಲಾವಾಬಿ. ಆರ್. ಅಂಬೇಡ್ಕರ್ಮಿನ್ನಿಯಾಪೋಲಿಸ್ವಿಶ್ವ ರಂಗಭೂಮಿ ದಿನಶಬ್ದಹ್ಯಾಲಿ ಕಾಮೆಟ್ಚಾರ್ಲ್ಸ್‌‌ ಮ್ಯಾನ್ಸನ್‌‌‌ಆಹಾರ ಸಂರಕ್ಷಣೆಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಉತ್ತರ ಐರ್ಲೆಂಡ್‌‌ಸೋನಾರ್ಕವಿರಾಜಮಾರ್ಗಆಂಗ್‌ಕರ್ ವಾಟ್ಭಾರತದ ಸಂವಿಧಾನಪರಮಾಣುಕೌಲಾಲಂಪುರ್ದ.ರಾ.ಬೇಂದ್ರೆಸಸ್ಯ ಜೀವಕೋಶತಂಬಾಕು ಸೇವನೆ(ಧೂಮಪಾನ)ವಿದ್ಯುಲ್ಲೇಪಿಸುವಿಕೆಕನಕದಾಸರುಪರಿಸರ ವ್ಯವಸ್ಥೆಕುಡಿಯುವ ನೀರುಇಮ್ಮಡಿ ಪುಲಿಕೇಶಿಪಾರ್ವತಿಲಿಯೊನೆಲ್‌ ಮೆಸ್ಸಿಪಂಜಾಬ್ಕನ್ನಡ ಸಾಹಿತ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಿತ್ತೀಯ ನೀತಿತತ್ಸಮ-ತದ್ಭವಪುರಂದರದಾಸಮಹಾತ್ಮ ಗಾಂಧಿಪಂಪಪ್ರತಿಧ್ವನಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಹಲ್ಮಿಡಿ ಶಾಸನಕರ್ನಾಟಕದ ಇತಿಹಾಸನೈಟ್ರೋಜನ್ ಚಕ್ರಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಹಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಾಮ್ರಾಟ್ ಅಶೋಕಪ್ರಚ್ಛನ್ನ ಶಕ್ತಿಹಿಂದೂ ಮಾಸಗಳುಕನ್ನಡ ವ್ಯಾಕರಣಬಲಚಿತ್ರ:Teen Murti Bhavan in New Delhi.jpgಮಡಿಲಗಣಕ ಅಥವಾ ಲ್ಯಾಪ್‌ಟಾಪ್ಸಸ್ಯವಚನ ಸಾಹಿತ್ಯಕನ್ನಡ ರಂಗಭೂಮಿರಾಮಾಯಣಭೂಮಿಪ್ರಾಚೀನ ಈಜಿಪ್ಟ್‌ಲೋಹಾಭಅರಿಸ್ಟಾಟಲ್‌ಹಜ್ವೇಗೋತ್ಕರ್ಷಮಣ್ಣುಭಾರತದ ಸ್ವಾತಂತ್ರ್ಯ ಚಳುವಳಿಭಾರತದ ನದಿಗಳುಕರ್ನಾಟಕದ ಏಕೀಕರಣಅಯಾನುಅಕ್ಕಮಹಾದೇವಿಒಂದನೆಯ ಮಹಾಯುದ್ಧನೀರಾವರಿಕಂಪ್ಯೂಟರ್ದಲಿತಸಮಾಜಶಾಸ್ತ್ರಭಾರತೀಯ ಮೂಲಭೂತ ಹಕ್ಕುಗಳುಲೋಕಸಭೆವಿಜಯನಗರ ಸಾಮ್ರಾಜ್ಯತೂಕಯುಗಾದಿಪೆರಿಯಾರ್ ರಾಮಸ್ವಾಮಿಕದಂಬ ರಾಜವಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪೆಟ್ರೋಲಿಯಮ್ಕ್ರೈಸ್ತ ಧರ್ಮಸ್ವಾಮಿ ವಿವೇಕಾನಂದ