ಮೊಲೆ

ಸಸ್ತನಿ ಗ್ರಂಥಿಯನ್ನು ಹೊಂದಿರುವ ಪ್ರೈಮೇಟ್ನ ಮುಂಡದ ಪ್ರದೇಶ

ಮೊಲೆಯು ಪ್ರೈಮೇಟ್‍ಗಳ ಮುಂಡದ ಮೇಲಿನ ಮುಂಭಾಗದ ಪ್ರದೇಶದಲ್ಲಿ ಸ್ಥಿತವಾಗಿರುವ ಎರಡು ಉಬ್ಬುಗಳಲ್ಲಿ ಒಂದು. ಹೆಣ್ಣುಗಳಲ್ಲಿ, ಇದು ಶಿಶುಗಳಿಗೆ ಹಾಲೂಡಿಸಲು ಹಾಲನ್ನು ಉತ್ಪಾದಿಸುವ ಮತ್ತು ಸ್ರವಿಸುವ ಸ್ತನಗ್ರಂಥಿಯಾಗಿ ಕಾರ್ಯನಿರ್ವಹಿಸುತ್ತದೆ. ಹೆಣ್ಣುಗಳು ಮತ್ತು ಗಂಡುಗಳು ಇಬ್ಬರೂ ಸಮಾನವಾದ ಭ್ರೂಣ ಅಂಗಾಂಶಗಳಿಂದ ಮೊಲೆಗಳು ವಿಕಸಿಸಿಕೊಳ್ಳುತ್ತವೆ. ಪ್ರೌಢಾವಸ್ಥೆಯಲ್ಲಿ, ಬೆಳವಣಿಗೆ ಹಾರ್ಮೋನಿನ ಜೊತೆಯಲ್ಲಿ ಮದಜನಕಗಳು, ಹೆಣ್ಣು ಮಾನವರಲ್ಲಿ ಮತ್ತು ಇತರ ಪ್ರೈಮೇಟ್‍ಗಳಲ್ಲಿ ಸ್ವಲ್ಪ ಮಟ್ಟಿಗೆ ಮೊಲೆಯ ಬೆಳವಣಿಗೆಯನ್ನು ಉಂಟುಮಾಡುತ್ತವೆ. ಇತರ ಹೆಣ್ಣು ಪ್ರೈಮೇಟ್‍ಗಳಲ್ಲಿ ಮೊಲೆಯ ಬೆಳವಣಿಗೆಯು ಸಾಮಾನ್ಯವಾಗಿ ಗರ್ಭಧಾರಣೆಯ ಜೊತೆಗೆ ಮಾತ್ರ ಆಗುತ್ತದೆ.

ನಾಳಗಳ ಒಂದು ಜಾಲವನ್ನು ಚರ್ಮದ ಕೆಳಗಿನ ಕೊಬ್ಬು ಆವರಿಸುತ್ತದೆ. ನಾಳಗಳ ಈ ಜಾಲವು ಮೊಲೆತೊಟ್ಟಿನ ಮೇಲೆ ಒಟ್ಟುಸೇರುತ್ತದೆ, ಮತ್ತು ಈ ಅಂಗಾಂಶಗಳು ಮೊಲೆಗೆ ಅದರ ಗಾತ್ರ ಮತ್ತು ಆಕಾರವನ್ನು ನೀಡುತ್ತವೆ. ನಾಳಗಳ ಕೊನೆಗಳಲ್ಲಿ ಕಿರುಹಾಲೆಗಳು ಅಥವಾ ಕಿರುಗುಳಿಗಳ ಗೊಂಚಲುಗಳಿವೆ. ಹಾರ್ಮೋನು ಸಂಜ್ಞೆಗಳಿಗೆ ಪ್ರತಿಕ್ರಿಯೆಯಾಗಿ ಇಲ್ಲಿ ಹಾಲಿನ ಉತ್ಪಾದನೆಯಾಗಿ ಸಂಗ್ರಹವಾಗುತ್ತದೆ.[೧] ಗರ್ಭಾವಸ್ಥೆಯ ಅವಧಿಯಲ್ಲಿ, ಎಸ್ಟ್ರೋಜನ್‍ಗಳು, ಪ್ರೊಜೆಸ್ಟರಾನ್, ಮತ್ತು ಪ್ರೋಲ್ಯಾಕ್ಟಿನ್ ಸೇರಿದಂತೆ ಹಾರ್ಮೋನುಗಳ ಸಂಕೀರ್ಣವಾದ ಪರಸ್ಪರ ಕ್ರಿಯೆಗೆ ಮೊಲೆಯು ಪ್ರತಿಕ್ರಿಯಿಸುತ್ತದೆ. ಇವು ಹಾಲೂಡಿಕೆ ಮತ್ತು ಸ್ತನ್ಯಪಾನದ ತಯಾರಿಯಲ್ಲಿ ಮೊಲೆಯ ಬೆಳವಣಿಗೆಯ ಸಮಾಪ್ತಿಯಲ್ಲಿ ಮಧ್ಯಸ್ಥಿಕೆ ವಹಿಸುತ್ತವೆ, ಅಂದರೆ ಕಿರುಹಾಲೆಕಿರುಗುಳಿ ಪಕ್ವತೆಯಲ್ಲಿ.

ಶಿಶುಗಳಿಗೆ ಪೋಷಕಾಂಶಗಳನ್ನು ಒದಗಿಸುವ ತಮ್ಮ ಪ್ರಧಾನ ಕಾರ್ಯದ ಜೊತೆಗೆ, ಹೆಣ್ಣಿನ ಮೊಲೆಗಳು ಸಾಮಾಜಿಕ ಮತ್ತು ಲೈಂಗಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಗಮನಾರ್ಹ ಪ್ರಾಚೀನ ಹಾಗೂ ಆಧುನಿಕ ಶಿಲ್ಪಕಲೆ, ಕಲೆ ಮತ್ತು ಛಾಯಾಗ್ರಹಣಕಲೆಯಲ್ಲಿ ಮೊಲೆಗಳನ್ನು ಚಿತ್ರಿಸಲಾಗಿದೆ. ತನ್ನ ದೇಹ ಮತ್ತು ಲೈಂಗಿಕ ಆಕರ್ಷಣೀಯತೆಯ ಬಗ್ಗೆ ಒಬ್ಬ ಮಹಿಳೆಯ ಗ್ರಹಿಕೆಯಲ್ಲಿ ಮೊಲೆಗಳು ಪ್ರಮುಖವಾಗಿ ಪ್ರಕಟವಾಗಬಹುದು. ಅನೇಕ ಪಾಶ್ಚಾತ್ಯ ಸಂಸ್ಕೃತಿಗಳು ಮೊಲೆಗಳನ್ನು ಲೈಂಗಿಕತೆಯೊಂದಿಗೆ ಸಂಬಂಧಿಸುತ್ತವೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತೆರೆದ ಮೊಲೆಗಳನ್ನು ನಿರ್ಲಜ್ಜ ಅಥವಾ ಅಸಭ್ಯವೆಂದು ಪರಿಗಣಿಸುವ ಪ್ರವೃತ್ತಿ ಹೊಂದಿರುತ್ತವೆ. ಮೊಲೆಗಳು, ವಿಶೇಷವಾಗಿ ಮೊಲೆತೊಟ್ಟುಗಳು, ಕಾಮಪ್ರಚೋದಕ ವಿಷಯವಾಗಿವೆ. ಒಬ್ಬ ಮಹಿಳೆಯ ಮೊದಲ ಗರ್ಭಧಾರಣೆಯಾದಾಗ ಮಾತ್ರ ಮೊಲೆಗಳು ಸಂಪೂರ್ಣ ಪರಿಪಕ್ವತೆಯನ್ನು ತಲುಪುತ್ತವೆ. ಮೊಲೆಗಳ ಬದಲಾವಣೆಗಳು ಗರ್ಭಾವಸ್ಥೆಯ ಅತ್ಯಂತ ಮೊದಲಿನ ಚಿಹ್ನೆಗಳ ಪೈಕಿ ಒಂದಾಗಿವೆ.

ಉಲ್ಲೇಖಗಳುಬದಲಾಯಿಸಿ

  1. "SEER Training: Breast Anatomy". National Cancer Institute. Retrieved 9 May 2012.
🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಜೀವಕೋಶಧೂಮಕೇತುಪ್ರಸ್ಥಭೂಮಿಕುವೆಂಪುಸಹಾಯ:ಲಿಪ್ಯಂತರನ್ಯೂಟನ್‍ನ ಚಲನೆಯ ನಿಯಮಗಳುವರ್ಣತಂತು (ಕ್ರೋಮೋಸೋಮ್)ವಿಶೇಷ:Searchಬ್ರಿಟೀಷ್ ಸಾಮ್ರಾಜ್ಯಗುರುಲಿಂಗ ಕಾಪಸೆಕನ್ನಡ ಗುಣಿತಾಕ್ಷರಗಳುಗಾದೆಬ್ರಾಟಿಸ್ಲಾವಾಬಿ. ಆರ್. ಅಂಬೇಡ್ಕರ್ಮಿನ್ನಿಯಾಪೋಲಿಸ್ವಿಶ್ವ ರಂಗಭೂಮಿ ದಿನಶಬ್ದಹ್ಯಾಲಿ ಕಾಮೆಟ್ಚಾರ್ಲ್ಸ್‌‌ ಮ್ಯಾನ್ಸನ್‌‌‌ಆಹಾರ ಸಂರಕ್ಷಣೆಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಉತ್ತರ ಐರ್ಲೆಂಡ್‌‌ಸೋನಾರ್ಕವಿರಾಜಮಾರ್ಗಆಂಗ್‌ಕರ್ ವಾಟ್ಭಾರತದ ಸಂವಿಧಾನಪರಮಾಣುಕೌಲಾಲಂಪುರ್ದ.ರಾ.ಬೇಂದ್ರೆಸಸ್ಯ ಜೀವಕೋಶತಂಬಾಕು ಸೇವನೆ(ಧೂಮಪಾನ)ವಿದ್ಯುಲ್ಲೇಪಿಸುವಿಕೆಕನಕದಾಸರುಪರಿಸರ ವ್ಯವಸ್ಥೆಕುಡಿಯುವ ನೀರುಇಮ್ಮಡಿ ಪುಲಿಕೇಶಿಪಾರ್ವತಿಲಿಯೊನೆಲ್‌ ಮೆಸ್ಸಿಪಂಜಾಬ್ಕನ್ನಡ ಸಾಹಿತ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಿತ್ತೀಯ ನೀತಿತತ್ಸಮ-ತದ್ಭವಪುರಂದರದಾಸಮಹಾತ್ಮ ಗಾಂಧಿಪಂಪಪ್ರತಿಧ್ವನಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಹಲ್ಮಿಡಿ ಶಾಸನಕರ್ನಾಟಕದ ಇತಿಹಾಸನೈಟ್ರೋಜನ್ ಚಕ್ರಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಹಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಾಮ್ರಾಟ್ ಅಶೋಕಪ್ರಚ್ಛನ್ನ ಶಕ್ತಿಹಿಂದೂ ಮಾಸಗಳುಕನ್ನಡ ವ್ಯಾಕರಣಬಲಚಿತ್ರ:Teen Murti Bhavan in New Delhi.jpgಮಡಿಲಗಣಕ ಅಥವಾ ಲ್ಯಾಪ್‌ಟಾಪ್ಸಸ್ಯವಚನ ಸಾಹಿತ್ಯಕನ್ನಡ ರಂಗಭೂಮಿರಾಮಾಯಣಭೂಮಿಪ್ರಾಚೀನ ಈಜಿಪ್ಟ್‌ಲೋಹಾಭಅರಿಸ್ಟಾಟಲ್‌ಹಜ್ವೇಗೋತ್ಕರ್ಷಮಣ್ಣುಭಾರತದ ಸ್ವಾತಂತ್ರ್ಯ ಚಳುವಳಿಭಾರತದ ನದಿಗಳುಕರ್ನಾಟಕದ ಏಕೀಕರಣಅಯಾನುಅಕ್ಕಮಹಾದೇವಿಒಂದನೆಯ ಮಹಾಯುದ್ಧನೀರಾವರಿಕಂಪ್ಯೂಟರ್ದಲಿತಸಮಾಜಶಾಸ್ತ್ರಭಾರತೀಯ ಮೂಲಭೂತ ಹಕ್ಕುಗಳುಲೋಕಸಭೆವಿಜಯನಗರ ಸಾಮ್ರಾಜ್ಯತೂಕಯುಗಾದಿಪೆರಿಯಾರ್ ರಾಮಸ್ವಾಮಿಕದಂಬ ರಾಜವಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪೆಟ್ರೋಲಿಯಮ್ಕ್ರೈಸ್ತ ಧರ್ಮಸ್ವಾಮಿ ವಿವೇಕಾನಂದ