ಬ್ಯಾಕ್ಟೀರಿಯ

ಬ್ಯಾಕ್ಟೀರಿಯ ಕೇಂದ್ರಿಕೆ ಯಿಲ್ಲದ ಒಂದೇ ಜೀವಕೋಶವುಳ್ಳ, ಸೂಕ್ಷ್ಮ ಜೀವಿಗಳ ಒಂದು ವರ್ಗ. ಬ್ಯಾಕ್ಟೀರಿಯಗಳು ವರ್ತುಲಾಕಾರ ಅಥವಾ ದಂಡಾಕಾರದಲ್ಲಿದ್ದು ಸುಮಾರು ೦.೫ - ೫ ಮೈಕ್ರಾನ್ಗಳಷ್ಟು ಉದ್ದವಿರುತ್ತವೆ. ಬ್ಯಾಕ್ಟೀರಿಯಗಳ ಅಧ್ಯಯನಕ್ಕೆ "ಬ್ಯಾಕ್ಟೀರಿಯೋಲಜಿ" ಎನ್ನುತ್ತಾರೆ.

ಎಸ್ಚೆರೀಶಿಯ ಕೋಲಿ ಬ್ಯಾಕ್ಟೀರಿಯ

ಪರಿಸರದ ಎಲ್ಲ ವಾತಾವರಣಗಳಲ್ಲಿಯೂ ವಿವಿಧ ರೀತಿಯ ಬ್ಯಾಕ್ಟೀರಿಯಗಳು ಇರುತ್ತವೆ. ನೀರಿನಲ್ಲಿ, ಮಣ್ಣಿನಲ್ಲಿ, ಗಾಳಿಯಲ್ಲಿ - ಅಷ್ಟಲ್ಲದೆ ಸಲ್ಫ್ಯೂರಿಕ್ ಆಮ್ಲ ಮತ್ತು ವಿಕಿರಣಶೀಲ ವಸ್ತುಗಳ ಒಳಗೆಯೂ ಬ್ಯಾಕ್ಟೀರಿಯಗಳು ಕಂಡು ಬರುತ್ತವೆ. ಸಾಧಾರಣವಾಗಿ, ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು ೧೦೦೦ ಕೋಟಿ, ಹಾಗೂ ಮಿಲೀ ಸಮುದ್ರ ನೀರಿನಲ್ಲಿ ಒಂದು ಲಕ್ಷ ಬ್ಯಾಕ್ಟೀರಿಯಗಳು ಇರುತ್ತವೆ.

ಮಾನವರ ದೇಹದ ಎಲ್ಲ ಭಾಗಗಳಲ್ಲಿಯೂ - ಮುಖ್ಯವಾಗಿ ಬಾಯಿ, ಚರ್ಮ, ಹಾಗೂ ಜೀರ್ಣಾಂಗಗಳಲ್ಲಿ - ಬ್ಯಾಕ್ಟೀರಿಯಗಳು ಕಂಡುಬರುತ್ತವೆ. ಮಾನವರ ಆರೋಗ್ಯದ ದ್ರಷ್ಟಿಯಿಂದ ಬ್ಯಾಕ್ಟೀರಿಯಗಳ ಪಾತ್ರ ಗಮನಾರ್ಹವಾದದ್ದು - ಕೆಲವು ರೀತಿಯ ಬ್ಯಾಕ್ಟೀರಿಯಗಳು ನಮ್ಮ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ, ಇನ್ನು ಕೆಲವು ಮಾನವರಲ್ಲಿ ಅನೇಕ ರೀತಿಯ ರೋಗಗಳಿಗೆ ಕಾರಣವಾಗಿವೆ. ಚಾರಿತ್ರಿಕವಾಗಿ, ಕುಷ್ಠ, ಪ್ಲೇಗ್ ಮೊದಲಾದ ರೋಗಗಳಿಗೆ ಕಾರಣವಾಗುವ ಮೂಲಕ ಬ್ಯಾಕ್ಟೀರಿಯಗಳು ಅಪಾರ ಹಾನಿಯನ್ನೂ ತಂದೊಡ್ಡಿವೆ. ಆಂಟಿಬಯಾಟಿಕ್ಗಳ ಆವಿಷ್ಕಾರದ ನಂತರ ಬ್ಯಾಕ್ಟೀರಿಯಗಳ ರೋಗಕಾರಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯುವಲ್ಲಿ ಸಫಲತೆ ದೊರಕಿದೆ.

ಚರಿತ್ರೆಬದಲಾಯಿಸಿ

ಬ್ಯಾಕ್ಟೀರಿಯಗಳ ಶಾಸ್ತ್ರೀಯ ಅಧ್ಯಯನವನ್ನು ಮೊದಲ ಬಾರಿಗೆ ನಡೆಸಿದ ವಿಜ್ಞಾನಿ ಆಂಟನ್ ವಾನ್ ಲೀವನ್‍ಹಾಕ್. ೧೬೭೪ರಲ್ಲಿ ತಮ್ಮದೇ ರಚನೆಯ ಸೂಕ್ಷ್ಮದರ್ಶಕದ ಮೂಲಕ ಬ್ಯಾಕ್ಟೀರಿಯಗಳನ್ನು ಇವರು ಗಮನಿಸಿದರು. "ಬ್ಯಾಕ್ಟೀರಿಯ" ಪದವನ್ನು ಬಳಕೆಗೆ ತಂದವರು ಎರೆನ್‍ಬರ್ಗ್ ಎಂಬ ವಿಜ್ಞಾನಿ (೧೮೨೮ ರಲ್ಲಿ).

ಜೈವಿಕ ರಚನೆಬದಲಾಯಿಸಿ

ವಿವಿಧ ಬ್ಯಾಕ್ಟೀರಿಯಗಳ ಜೈವಿಕ ರಚನೆ

ವಿವಿಧ ಬ್ಯಾಕ್ಟೀರಿಯಗಳು ಅನೇಕ ಆಕಾರ-ಗಾತ್ರಗಳಲ್ಲಿ ಕಂಡು ಬಂದರೂ, ಬಹುಪಾಲು ಬ್ಯಾಕ್ಟೀರಿಯಗಳು ವರ್ತುಲ/ದಂಡಾಕಾರದಲ್ಲಿ ಇದ್ದು ೦.೫-೫ ಮೈಕ್ರಾನ್ ಉದ್ದ ಇರುತ್ತವೆ. ಕೆಲ ಬ್ಯಾಕ್ಟೀರಿಯಗಳು ೦.೫ ಮಿ.ಮೀ. ಉದ್ದವಿದ್ದು ಬರಿಗಣ್ಣಿಗೆ ಕಂಡರೆ, ಇನ್ನು ಕೆಲವು ೦.೨ ಮೈಕ್ರಾನ್ ಅಷ್ಟೇ ಇರುವದೂ ಉಂಟು. ಗಾತ್ರದಲ್ಲಿ ಇಷ್ಟು ವೈವಿಧ್ಯತೆಯಿದ್ದರೂ, ಆಕಾರದಲ್ಲಿ ಪ್ರಮುಖವಾಗಿ ದುಂಡು (ಕಾಕಸ್) ಅಥವ ಕೋಲಿನಾಕಾರ (ಬ್ಯಾಸಿಲಸ್) ಹೊಂದಿರುತ್ತವೆ.

ಸರಳ ಜೀವರಚನೆಯಿದ್ದರೂ, ಕೆಲವೊಮ್ಮೆ ಅನೇಕ ಬ್ಯಾಕ್ಟೀರಿಯಾಗಳು ಸಂಯೋಗದಲ್ಲಿ ಕ್ಲಿಷ್ಟ ವಿನ್ಯಾಸಗಳಲ್ಲೂ ಕಂಡುಬರುತ್ತವೆ. ಉದಾಹರಣೆಗೆ, ಮಿಕ್ಸೋಬ್ಯಾಕ್ಟೀರಿಯ ತಳಿಯು ಅಹಾರ ಅಲಭ್ಯ ಸಮಯಗಳಲ್ಲಿ ಸುಮಾರು ೧೦೦,೦೦೦ ಜೀವಿಗಳ ೦.೫ ಸೆಂಟಿಮೀಟರ್ಗಳಷ್ಟು ಗಾತ್ರದ ಸಂಯೋಗಗಳನ್ನು ಹೊಂದುತ್ತವೆ. ಇನ್ನು ಕೆಲವು ತಳಿಗಳು (ಉದಾ. ಕ್ಲ್ಯಾಮೀಡಿಯ) ಕೇಂದ್ರಿಕೆಯುಳ್ಳ ಇತರ ಜೀವಿಗಳ ಜೀವಕೋಶದ ಒಳಗೆ ಮಾತ್ರ ಜೀವಿಸಬಲ್ಲವು.

ನೋಡಿಬದಲಾಯಿಸಿ

ಹೆಚ್ಚಿನ ಓದಿಗೆಬದಲಾಯಿಸಿ

ಉಲ್ಲೇಖಬದಲಾಯಿಸಿ

??

🔥 Top keywords: ಕನ್ನಡಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಮುಖ್ಯ ಪುಟಬಸವೇಶ್ವರಬಿ. ಆರ್. ಅಂಬೇಡ್ಕರ್ಎ.ಪಿ.ಜೆ.ಅಬ್ದುಲ್ ಕಲಾಂಕನಕದಾಸರುದ.ರಾ.ಬೇಂದ್ರೆಕರ್ನಾಟಕದ ಏಕೀಕರಣಗೌತಮ ಬುದ್ಧವಚನ ಸಾಹಿತ್ಯಮಹಾತ್ಮ ಗಾಂಧಿಭಾರತದ ಸಂವಿಧಾನಭಾರತೀಯ ರಿಸರ್ವ್ ಬ್ಯಾಂಕ್ಪುರಂದರದಾಸಪೂರ್ಣಚಂದ್ರ ತೇಜಸ್ವಿಭಾರತದ ಆರ್ಥಿಕ ವ್ಯವಸ್ಥೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಚಂದ್ರಶೇಖರ ಕಂಬಾರಕನ್ನಡ ಸಾಹಿತ್ಯಜಾನಪದಗಾದೆಅಕ್ಕಮಹಾದೇವಿಸಾವಯವ ಬೇಸಾಯಸಾಮ್ರಾಟ್ ಅಶೋಕಕರ್ನಾಟಕಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ವಚನಕಾರರ ಅಂಕಿತ ನಾಮಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಯಾನ-೩ಕಿತ್ತೂರು ಚೆನ್ನಮ್ಮಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹಂಪೆಕೃಷಿಭಾರತೀಯ ಸಂಸ್ಕೃತಿರಾಮಾಯಣಭಾರತ ಸಂವಿಧಾನದ ಪೀಠಿಕೆಶಿವರಾಮ ಕಾರಂತಕನ್ನಡ ಅಕ್ಷರಮಾಲೆಬುದ್ಧಇಮ್ಮಡಿ ಪುಲಿಕೇಶಿಕರ್ನಾಟಕದ ಹಬ್ಬಗಳುಒಂದನೆಯ ಮಹಾಯುದ್ಧಪಂಪಭಾರತೀಯ ಮೂಲಭೂತ ಹಕ್ಕುಗಳುಜಾಗತೀಕರಣಭಾರತದ ಸ್ವಾತಂತ್ರ್ಯ ಚಳುವಳಿಕನ್ನಡದಲ್ಲಿ ವಚನ ಸಾಹಿತ್ಯಸೀತೆಸಾಲುಮರದ ತಿಮ್ಮಕ್ಕಅರಿಸ್ಟಾಟಲ್‌ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿಕರ್ನಾಟಕದ ನದಿಗಳುದ್ರೌಪದಿಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಜ್ಞಾನಪೀಠ ಪ್ರಶಸ್ತಿಅಲ್ಲಮ ಪ್ರಭುಕನ್ನಡ ಸಾಹಿತ್ಯ ಪ್ರಕಾರಗಳುಯಕ್ಷಗಾನತತ್ಸಮ-ತದ್ಭವಮಹಾಭಾರತಇಮ್ಮಡಿ ಪುಲಕೇಶಿಕರ್ನಾಟಕದ ಜಾನಪದ ಕಲೆಗಳುಜವಾಹರ‌ಲಾಲ್ ನೆಹರುಗುಪ್ತ ಸಾಮ್ರಾಜ್ಯಕುಮಾರವ್ಯಾಸಸಂಗೊಳ್ಳಿ ರಾಯಣ್ಣಕರ್ನಾಟಕದ ಇತಿಹಾಸಜಿ.ಎಸ್.ಶಿವರುದ್ರಪ್ಪಕನ್ನಡ ಗುಣಿತಾಕ್ಷರಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಾದಾಮಿಡೊಳ್ಳು ಕುಣಿತವಿನಾಯಕ ಕೃಷ್ಣ ಗೋಕಾಕಹೆಣ್ಣು ಬ್ರೂಣ ಹತ್ಯೆಸಮಾಜಶಾಸ್ತ್ರಯೇಸು ಕ್ರಿಸ್ತವಿಜಯ ಕರ್ನಾಟಕವಾಯು ಮಾಲಿನ್ಯಕೈಗಾರಿಕೆಗಳುಕಂಸಾಳೆವೀರಗಾಸೆಕವಿರಾಜಮಾರ್ಗಮೂಢನಂಬಿಕೆಗಳುರಾಷ್ಟ್ರೀಯ ವರಮಾನಸಹಕಾರಿ ಸಂಘಗಳುಪ್ಲೇಟೊಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಗಿಕುಟುಂಬಗಿರೀಶ್ ಕಾರ್ನಾಡ್ಬೆಂಗಳೂರುಗ್ರಾಮ ಪಂಚಾಯತಿಹಿಂದೂ ಮಾಸಗಳುಜನಪದ ಕಲೆಗಳುರಾಮ